December 29, 2021

ವಿಶ್ವಮಾನವ ದಿನಾಚರಣೆ

 


ನಾಗಮಂಗಲ .ಡಿ. 29.ಕುವೆಂಪು ಅವರ  ಒಂದು ದಿನ  ನೆನಪಲ್ಲ ಅವರ ಸಾಹಿತ್ಯ ಅಧ್ಯಯನ ನಿತ್ಯನಿರಂತರ ದಂತೆ ಅಧ್ಯಯನ ಮಾಡಲಾಗದಷ್ಟು ಕುವೆಂಪು ಸಾಹಿತ್ಯವನ್ನು ಅರಿಯಬೇಕೆಂದು ಮಂಡ್ಯ ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಮಂಜುನಾಥ್ ತಿಳಿಸಿದರು.

 ಅವರಿಂದು ನಾಗಮಂಗಲ ಶ್ರೀ ಆದಿಚುಂಚನಗಿರಿ ಕಲಾ ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಏರ್ಪಡಿಸಿದ್ದ ವಿಶ್ವಮಾನವ ದಿನಾಚರಣೆ ಭಾಗವಹಿಸಿ ಮಾತನಾಡುತ್ತಾ ಕುವೆಂಪು  ರವರು ಸಾಹಿತ್ಯ ನಾವುಗಳು ನಮ್ಮ ಓದಿನ ಜೊತೆಯಲ್ಲಿ ಅವರ ಸಾಹಿತ್ಯ ಕೂಲಂಕುಷವಾಗಿ ಅಧ್ಯಯನ ಜೊತೆಯಲ್ಲಿ ಅವರ ಸಾಹಿತ್ಯ ನಿತ್ಯ ಜೀವನದ ಆದರ್ಶ ವಾಗಿದ್ದು ಅವುಗಳನ್ನು ಅರಿಯಲು ನಾವು ಇವರ ಸಾಹಿತ್ಯ ಅತ್ಯಗತ್ಯ ಎಂದು ತಿಳಿಸಿದರು.
 ಕನ್ನಡದ ಒಬ್ಬ ಶ್ರೇಷ್ಠ ಕವಿಯಾಗಿ ಜಗದಗಲಕ್ಕೂ ಅವರ ನೆನಪು ಅನನ್ಯವಾಗಿದ್ದು ಇಂತಹ  ಮಹನೀಯರ ಜನ್ಮದಿನ ಕೇವಲ ಒಂದು ದಿನ ಸೀಮಿತವಾಗಿರದೆ  ನಿತ್ಯವೂ ನೆನಪಾಗುವಂತೆ ನಾವುಗಳು ಸ್ಮರಿಸಬೇಕು ಎಂದು  ಈ ಸಂದರ್ಭದಲ್ಲಿ ಕರೆಕೊಟ್ಟರು 
ಜಗದ ಕವಿ ಯುಗದ ಕವಿ ಎಂದು ವಿವಿಧ ಕನ್ನಡದ ನಾಮಾಂಕಿತ ಗಳಲ್ಲಿ ಅದ್ಭುತ ಕವಿಯಾಗಿ  ಸಾಹಿತ್ಯ ಲೋಕಕ್ಕೆ ನೀಡಿರುವ ಅಮೂಲಾಗ್ರ ಸೇವೆಗಳನ್ನು ನಾವುಗಳು ವ್ಯಾಸಂಗದಲ್ಲಿ ಇವರನ್ನು ಮನನ ಮಾಡಿ ಮಾಡಿಕೊಳ್ಳಬೇಕೆಂದು ಸೂಕ್ಷ್ಮವಾಗಿ ಕುವೆಂಪುರವರನ್ನು ಪರಿಚಯ ಮಾಡಿದ ಪ್ರಾಚಾರ್ಯರಾದ ಬಿ.ಕೆ ಲೋಕೇಶ್ ಮಾತನಾಡಿದರು.

 ಇದೇ ಸಂದರ್ಭದಲ್ಲಿ ಕಾಲೇಜಿನ ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು .