November 25, 2021

ಆದಿಚುಂಚನಗಿರಿ ಕಾಲೇಜಿನಲ್ಲಿ ರಕ್ತದಾನ ಶಿಬಿರ

 

ನಾಗಮಂಗಲ:-ನ. 25.ಆದಿಚುಂಚನಗಿರಿ ಪ್ರಥಮದರ್ಜೆ ಕಾಲೇಜಿನ NSS & Redcross ಸಂಸ್ಥೆಯು  ಶ್ರೀ ಆದಿಚುಂಚನಗಿರಿ ಆಸ್ಪತ್ರೆ, ಬಿ.ಜಿ.ನಗರ, ರೋಟರಿ ಕ್ಲಬ್ ಬೆಂಗಳೂರು ಸೌತ್ & ರೋಟರಿ ಕ್ಲಬ್ ಬಿ.ಜಿ. ನಗರ ಇವರ ಸಹಯೋಗದಲ್ಲಿ ರಕ್ತದಾನ ಶಿಭಿರ ಏರ್ಪಡಿಸಲಾಗಿತ್ತು. 


ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಶ್ರೀ ಸತ್ ಕೀರ್ತಿ ಸ್ವಾಮೀಜಿ ರಕ್ತದಾನ ಶಿಭಿರವನ್ನು ಉದ್ಘಾಟಿಸಿದರು.
 150 ಜನ ವಿದ್ಯಾರ್ಥಿಗಳುಮತ್ತು ಪ್ರಾಧ್ಯಾಪಕರು ರಕ್ತದಾನ ಮಾಡುವುದರ ಮೂಲಕ ಕೋವಿಡ್ ಸನ್ನಿವೇಶದಲ್ಲಿ ರಕ್ತಹೀನತೆಯಿಂದ ಬಳಲುತ್ತಿದ್ದ ಜೀವಗಳಿಗೆ ವರದಾನವಾದರು.

 ಈ ಸಂಧರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಬಿ. ಕೆ.ಲೋಕೇಶ್ ಮಾತನಾಡಿ ಪರಮ ಪೂಜ್ಯ ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದ ನಾಥ ಮಹಾಸ್ವಾಮೀಜಿಯವರ ಕ್ರಪಾಶೀರ್ವಾದದಿಂದ ಪ್ರತೀ ವರ್ಷ ನಮ್ಮ ಕಾಲೇಜಿನಲ್ಲಿ  ವಿದ್ಯಾರ್ಥಿಗಳು  ರಕ್ತದಾನ ಮಾಡುತ್ತಾ ಬರುತ್ತಿದ್ದು ಬಿ.ಜಿ. ನಗರದ ಗ್ರಾಮೀಣ ಆಸ್ಪತ್ರೆಯಲ್ಲಿ ಗ್ರಾಮೀಣ ಜನತೆಗೆ ಅನುಕೂಲವಾಗಲಿದೆ ಎಂದರು. 
ಈ ಸಂದರ್ಭದಲ್ಲಿ ಆದಿ ಚುಂಚನಗಿರಿ ಆಸ್ಪತ್ರೆಯ ಡಾ. ಸೋಮ ಶೇಖರ್, PRO  ಧರ್ಮೇಂದ್ರ, ರೋಟರಿಕ್ಲಬ್ ಬೆಂಗಳೂರಿನ ರೊII ವಾಸುದೇವ್, ರೊII ರಮೇಶ್ ಬಾಬು, ರೊII ಆನಂದ ಕೋಟ & ರೊII ಬಾಬು ನಾಗೇಂದ್ರ Scout & Guides ನ ಅಧಿಕಾರಿಗಳಾದ ಮೋಹನ ಕುಮಾರ್ ನಾಯಕ್, ಪವಿತ್ರ ಶಿಬಿರದ ಯಶಸ್ಸಿಗೆ ಶ್ರಮಿಸಿದರು.