November 16, 2021

ಆದಿಚುಂಚನಗಿರಿ ಕಾಲೇಜಿನಲ್ಲಿ ಒಂದು ವಾರಗಳ ಕಾಲ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ

 

ನಾಗಮಂಗಲ .ನ.16.ಶ್ರೀ ಆದಿಚುಂಚನಗಿರಿ ಕಲಾಮತ್ತು ವಾಣಿಜ್ಯ ವಿಜ್ಞಾನ ವಿಭಾಗ ಕಾಲೇಜಿನಲ್ಲಿ ಒಂದು ವಾರಗಳ ಕಾಲ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಆಚರಣೆಯ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

 ಪಟ್ಟಣದ ಆದಿಚುಂಚನಗಿರಿ ಕಲಾ, ವಾಣಿಜ್ಯ & ವಿಜ್ಞಾನ ಕಾಲೇಜಿನಲ್ಲಿ "ದಿನಾಂಕ 15-11-2021 ರಿಂದ 20-11-2021 ರ ವರೆಗೆ 
ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ" ಕಾರ್ಯಕ್ರಮ ಆಯೋಜಿಸಲಾಗಿದ್ದು ಪುಸ್ತಕ ಪರಿಚಯ, ಗ್ರಂಥಗಳಿಗೆ ಸಂಬಂಧಿಸಿದಂತೆ ರಸಪ್ರಶ್ನೆ ಕಾರ್ಯಕ್ರಮ ಮತ್ತು ಪುಸ್ತಕ ಪ್ರದರ್ಶನ ಕಾರ್ಯಕ್ರಮಗಳನ್ನು ಒಂದು ವಾರಗಳ ಕಾಲ ಆಯೋಜಿಸಲಾಗಿದೆ.  
15 -11 -2021 ರಂದು ಕಸ್ತೂರಬಾ ಆಶ್ರಮದ ಟ್ರಸ್ಟಿ ಪ್ರೊ.ಜಿ. ಬಿ. ಶಿವರಾಜು ರವರು ಸಪ್ರಾ ಹ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದರು.

 ದಿನಾಂಕ 16-17-2021 ರಂದು ನಾಗಮಂಗಲದ ಸಾಹಿತಿಗಳೂ ನಾಗಮಂಗಲ ತಾಲ್ಲೂಕಿನ 3 ನೇ ಸಾಹಿತ್ಯ ಸಮ್ಮೇಳನದ ಅದ್ಯಕ್ಷರಾದ ನಾ.ಸು. ನಾಗೇಶ್ ರವರು ಯಶವಂತ ಚಿತ್ತಾಲರ "ಆಬೋಲ" ಪುಸ್ತಕ ಪರಿಚಯ ಮಾಡಿಕೊಡುವುದರೊಂದಿಗೆ ಈ ಪುಸ್ತಕದ ಸಾರಾಂಶದಲ್ಲಿ ಬರುವ ಸಂದೇಶವನ್ನು ವಿದ್ಯಾಥಿಗಳಿಗೆ ಮನದಟ್ಟು ಮಾಡಿದರು .
 ಕಾಲೇಜಿನ ಪ್ರಾಂಶುಪಾಲ ಡಾ. ಬಿ. ಕೆ.ಲೋಕೇಶ್ ಅಧ್ಯಕ್ಷತೆ ವಯಿಸಿದ್ದರು, ಗ್ರಂಥಪಾಲಕರಾದ ಬಿ. ಎಲ್. ಕವಿತ  ಗ್ರಂಥಾಲಯ ಸಹಾಯಕರಾದ ವಿಜಯ್ ಕುಮಾರ್ ಮತ್ತಿತರು ಹಾಜರಿದ್ದರು.