July 26, 2021

ಆದಿಚುಂಚನಗಿರಿ ಕಲಾ ಮತ್ತು ವಾಣಿಜ್ಯಕಾಲೇಜಿನಲ್ಲಿ ಗಣಪತಿಹೋಮ

 ಆದಿಚುಂಚನಗಿರಿ ಕಲಾ ಮತ್ತು ವಾಣಿಜ್ಯಕಾಲೇಜಿನಲ್ಲಿ ಗಣಪತಿಹೋಮ ದೊಂದಿಗೆ ವಿದ್ಯಾರ್ಥಿಗಳಿಂದ ಸ್ವಾಗತಿಸಲಾಯಿತು.

 ನಾಗಮಂಗಲ . ಆದಿಚುಂಚನಗಿರಿ ಕಲಾ  ವಾಣಿಜ್ಯ ಮತ್ತು ವಿಜ್ಞಾನಪದವಿ ವಿಭಾಗ ಕಾಲೇಜಿನಲ್ಲಿ ಕಾಲೇಜು ಆರಂಭಕ್ಕೂ ಮುನ್ನ ಯಾವುದೇ ನಿರ್ವಿಘ್ನ ಆಗದಿರಲೆಂದು ಗಣಪತಿ ಹೋಮ ಆಚರಿಸುವ ಮುಖಾಂತರ ವಿದ್ಯಾರ್ಥಿಗಳನ್ನು ಬರಮಾಡಿಕೊಂಡರು.

 ನಾಗಮಂಗಲ ಪಟ್ಟಣದ ಶ್ರೀ ಆದಿಚುಂಚನಗಿರಿ ಕಲಾ ವಾಣಿಜ್ಯ ಮತ್ತು ವಿಜ್ಞಾನಪದವಿ ವಿಭಾಗ ಕಾಲೇಜಿನಲ್ಲಿ ಗಣಪತಿಹೋಮ ಆಚರಿಸುವ ಮುಖಾಂತರ ಮುಂದೆ ಯಾವ ಅನಾಹುತಗಳು ಆಗದಿರಲೆಂದು ಹಾಗೂ ಇದುವರೆಗೂ ಯಾವುದೇ ವಿದ್ಯಾರ್ಥಿಗಳಿಗೂ ಸಿಬ್ಬಂದಿ ವರ್ಗಕ್ಕೂ ತೊಂದರೆಯಾಗಿಲ್ಲ ಮುಂದೆಯೂ ಯಾವುದೇ ಅಡೆತಡೆಗಳು ಬಾರದಂತೆ ಕಾಲೇಜಿನ ಆವರಣದಲ್ಲಿ ಕಾಲೇಜು ಪ್ರಾಚಾರ್ಯರು ಹಾಗೂ ಉಪನ್ಯಾಸಕರ ಒಳಗೊಂಡಂತೆ ಗಣಪತಿಹೋಮ ಆಚರಿಸುವ ಮುಖಾಂತರ ವಿದ್ಯಾರ್ಥಿಗಳು ಶ್ರೀ ಗಣೇಶನಿಗೆ ಪುಷ್ಪಾರ್ಚನೆ ಮಾಡುವ ಮುಖಾಂತರ ತರಗತಿಗಳಿಗೆ ಹಾಜರಾಗಿದ್ದು ಕಂಡುಬಂದಿತ್ತು . 

ಕಾಲೇಜಿಗೆ ಬರುವಾಗ ವಿದ್ಯಾರ್ಥಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಂಡು ಲಸಿಕೆ ಮಾಡಿಸಿಕೊಳ್ಳದೆ ಇರುವವರು ಲಸಿಕೆ ಕಡ್ಡಾಯವಾಗಿ ಮಾಡಿಸಿಕೊಂಡು ಬರಬೇಕೆಂದು ಈ ಸಂದರ್ಭದಲ್ಲಿ ತಿಳಿಸಿದರು

ಇದೇ ಸಂದರ್ಭದಲ್ಲಿ ಕಾಲೇಜು ಪ್ರಾಚಾರ್ಯರಾದ ಬಿ .ಕೆ. ಲೋಕೇಶ್ ಹಾಗೂ ಉಪನ್ಯಾಸಕರು ಮತ್ತು ಸಿಬ್ಬಂದಿ ವರ್ಗದವರು ಹಾಜರಿದ್ದರು .