September 24, 2018

ಮೈಸೂರು ವಿಶ್ವವಿದ್ಯಾನಿಲಯ ಅಂತರ್ ಕಾಲೇಜು ಅಥ್ಲೆಟಿಕ್ ಸ್ಪರ್ಧೆ 2018-19 (18-09-2018)


|| ಜೈ ಶ್ರೀ ಗುರುದೇವ್ ||
ಶ್ರೀ ಆದಿಚುಂಚನಗಿರಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜು
ನಾಗಮಂಗಲ
90ನೇ ಮೈಸೂರು ವಿಶ್ವವಿದ್ಯಾನಿಲಯ ಅಂತರ್ ಕಾಲೇಜು ಅಥ್ಲೆಟಿಕ್ ಸ್ಪರ್ಧೆಯನ್ನು ನಾಗಮಂಗಲದ ಶ್ರೀ ಆದಿಚುಂಚನಗಿರಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ಸಹಯೋಗದಲ್ಲಿ ಶ್ರೀ ಆದಿಚುಂಚನಗಿರಿ ಕ್ಷೇತ್ರದ ಬಿ.ಜಿ.ಎಸ್. ಕ್ರೀಡಾಂಗಣದಲ್ಲಿ ದಿನಾಂಕ: 18-09-2018ರಿಂದ 20-09-2018ರವರೆಗೆ ಏರ್ಪಡಿಸಲಾಗಿತ್ತು.
ಪಂದ್ಯಾವಳಿಯ ಉದ್ಘಾಟನಾ ಸಮಾರಂಭದಲ್ಲಿ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿಯವರು ದಿವ್ಯಸಾನಿಧ್ಯವನ್ನ ವಹಿಸಿ, ಆಶೀರ್ವಚನವನ್ನು ನೀಡಿದರು. ಪೂಜ್ಯ ಶ್ರೀ ಶ್ರೀ ಪುರುಷೋತ್ತಮಾನಂದನಾಥ ಸ್ವಾಮೀಜಿಯವರು, ಪೂಜ್ಯ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರು ಸಾನಿಧ್ಯವನ್ನು ವಹಿಸಿದ್ದರು. ಮಾನ್ಯ ಉನ್ನತ ಶಿಕ್ಷಣ ಸಚಿವರಾದ ಸನ್ಮಾನ್ಯ ಶ್ರೀ ಜಿ.ಟಿ. ದೇವೇಗೌಡರವರು ಧ್ವಜಾರೋಹಣವನ್ನು ಮಾಡಿದರು. ಅಂತರ್ರಾಷ್ಟ್ರೀಯ ಓಟಗಾರ್ತಿಯಾದ ಜಿ.ಕೆ.ವಿಜಯಕುಮಾರಿರವರು ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿದರು. ಕಾರ್ಯಕ್ರಮದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಉಪಕುಲಪತಿಗಳಾದ ಪ್ರೊ.ಟಿ.ಕೆ. ಉಮೇಶ್ ರವರು, ನಾಗಮಂಗಲ ಕ್ಷೇತ್ರದ ಶಾಸಕರಾದ ಶ್ರೀ ಕೆ. ಸುರೇಶ್ ರವರು ಭಾಗವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ.ಬಿ.ಕೆ. ಲೋಕೇಶರವರು ವಹಿಸಿಕೊಂಡಿದ್ದರು.
3 ದಿನಗಳ 90ನೇ ಮೈಸೂರು ವಿಶ್ವವಿದ್ಯಾನಿಲಯದ ಅಂತರ್ ಕಾಲೇಜು ಅಥ್ಲೆಟಿಕ್ ಸ್ಪರ್ಧೆಯಲ್ಲಿ ಮೈಸೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ 4 ಜಿಲ್ಲೆಯ ಸುಮಾರು 1100 ಕ್ರೀಡಾಪಟುಗಳು ಪಾಲ್ಗೊಂಡಿದ್ದರು. ಬಾಲಕರು 22 ವಿಭಾಗಗಳಲ್ಲಿ ಮತ್ತು ಬಾಲಕಿಯರು 20 ವಿಭಾಗಗಳಲ್ಲಿ ಸ್ಪರ್ಧಿಸಿದ್ದರು.

* * * * *