ಆದಿ ಚುಂಚನಗಿರಿ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ (ಜನನ : ಜನವರಿ, ೧೮, ೧೯೪೫-ಮರಣ : ಜನವರಿ, ೧೩, ೨೦೧೩) 'ಬಾನಂದೂರಿ'ನ ಚಿಕ್ಕ ಲಿಂಗೇಗೌಡ, ಹಾಗೂಮೋಟಮ್ಮ ನವರ ೬ ಮಕ್ಕಳಲ್ಲಿ ಒಬ್ಬರಾಗಿ ಜನಿಸಿದರು. ಗಂಗಾಧರಯ್ಯನವರಿಗೆ, ಮೂರು ಜನ ಸೋದರಿಯರು, ಮತ್ತು ೨ ಜನ ಸಹೋದರರು ಇದ್ದಾರೆ. ಆದಿ ಚುಂಚನಗಿರಿ ಮಠದ ಹೆಸರಿನಲ್ಲಿ ಶಾಲೆ. ಕಾಲೇಜು, ಆಸ್ಪತ್ರೆ, ಪರಿಸರ, ಪ್ರಾಣಿ ಸಂರಕ್ಷಣೆ, ವೇದಾಧ್ಯಯನ, ಕೃಷಿ ಸೇರಿದಂತೆ ಹಲವಾರು ಧಾರ್ಮಿಕ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತಮ್ಮನ್ನು ನಿರಂತರವಾಗಿ ತೊಡಗಿಸಿಕೊಂಡಿದ್ದರು. ಆದಿ ಚುಂಚನಗಿರಿ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಯವರ ಮಠದ ವ್ಯಾಪ್ತಿಯಲ್ಲಿ ೧ ಮಿಲಿಯ ಗಿಂತ ಹೆಚ್ಚಿನ ಸಂಖೆಯಲ್ಲಿ ಮಕ್ಕಳು ಕಲಿಯುತ್ತಿದ್ದಾರೆ. ವಕ್ಕಲಿಗ ಮಠದ ಅಧಿಪತಿಯಾದರೂ ಎಲ್ಲ ಮತಗಳ ಬಗ್ಗೆ ಅವರಿಗೆ ಅಪಾರ ಗೌರವ ಹಾಗೂ ಆದರವಿತ್ತು. ದಲಿತರ ಉದ್ಧಾರಕ್ಕಾಗಿ ಶಿಕ್ಷಣ ಒದಗಿಸಲೆಂದು ಶಿಕ್ಷಣ ಸಮೂಹವನ್ನೇ ನಿರ್ಮಿಸಿ ಒಂದು ಕ್ರಾಂತಿಯನ್ನು ಮಾಡಿದರು. ಅನ್ನದಾಸೋಹ ಮತ್ತು ಅಕ್ಷರ ದಾಸೋಹದ ಮೂಲಕ ಬಡ ಜನರ ಸೇವೆಯನ್ನು ಮಾಡಿದರು. 'ಹಸಿರು ಕ್ರಾಂತಿ ಹರಿಕಾರ'ರೆಂದು ಹೆಸರುಗಳಿಸಿದ ಶ್ರೀಗಳು ೫ ಕೋಟಿಗಿಡಗಳನ್ನು ನೆಡುವಮೂಲಕ ಒಂದು ಹೊಸ ವಿಕ್ರಮವನ್ನು ಸ್ಥಾಪಿಸಿದ್ದಾರೆ. ರಮಾನಾಥ ಸ್ವಾಮೀಜಿಯವರಿಂದ ದೀಕ್ಷೆ ಪಡೆದಿದ್ದರು. ಬಿ.ಎಸ್ ಸಿ. ಪದವೀಧರರು. ೭೧ ನೇ ಪೀಠಾಧ್ಯಕ್ಷರಾಗಿ ೩೯ ವರ್ಷಗಳ ಕಾಲ ನಡೆಸಿರುವ ಕಾರ್ಯ ಅಪಾರ. ಸನ್. ೨೦೧೩ ರ, ಫೆಬ್ರವರಿ ೧೮ ರಂದು ಶ್ರೀಗಳ ೬೭ ನೆಯ ಜನ್ಮದಿನವನ್ನು ಆಚರಿಸಲು ಚಿಕ್ಕಬಳ್ಳಾಪುರದ ಮಠದಲ್ಲಿ ಎಲ್ಲಾ ಸಿದ್ಧತೆಗಳು ನಡೆಯುತ್ತಿದ್ದವು.
ಬಾಲಗಂಗಾಧರನಾಥ ಸ್ವಾಮೀಜಿಯವರ ಬಾಲ್ಯ
ಸ್ವಾಮೀಜಿಯವರ ಪೂರ್ವಾಶ್ರಮದ ಹೆಸರು 'ಗಂಗಾಧರಯ್ಯ.'. ಅವರು, ಸನ್. ೧೯೪೫ ರ, ಜನವರಿ, ೧೮ ರಂದು, ಬಾನಂದೂರಿನ ಚಿಕ್ಕ ಲಿಂಗೇಗೌಡ, ಹಾಗೂ ಮೋಟಮ್ಮ ನವರ ೬ ಮಕ್ಕಳಲ್ಲಿ ಒಬ್ಬರಾಗಿ ಜನಿಸಿದರು. ಗಂಗಾಧರಯ್ಯನವರಿಗೆ, ಮೂರು ಜನ ಸೋದರಿಯರು, ಮತ್ತು ೨ ಜನ ಸಹೋದರರು ಇದ್ದಾರೆ. ಆದಿ ಚುಂಚನಗಿರಿ ಮಠದ ಹೆಸರಿನಲ್ಲಿ ಶಾಲೆ. ಕಾಲೇಜು, ಆಸ್ಪತ್ರೆ, ಪರಿಸರ, ಪ್ರಾಣಿ ಸಂರಕ್ಷಣೆ, ವೇದಾಧ್ಯಯನ, ಕೃಷಿ ಸೇರಿದಂತೆ ಹಲವಾರು ಧಾರ್ಮಿಕ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತಮ್ಮನ್ನು ನಿರಂತರವಾಗಿ ತೊಡಗಿಸಿಕೊಂಡಿದ್ದರು.
ಪ್ರಶಸ್ತಿ ಮತ್ತು ಗೌರವಗಳು
ವರ್ಷ | ಬಿರುದುಗಳು |
---|---|
೧೯೯೦ | ರಾಷ್ಟ್ರೀಯ ಏಕತಾ ಪ್ರಶಸ್ತಿ; ಗ್ಲೋಬಲ್ ಎಕನಾಮಿಕ್ ಕೌನ್ಸಿಲ್, ನವ ದೆಹಲಿ |
೧೯೯೩ | ಅಭಿನವ ವಿವೇಕಾನಂದ; ವಿಶ್ವ ಧಾರ್ಮಿಕ ಶೃಂಗಸಭೆ, ಚಿಕಾಗೋ, ಯುಎಸ್ಎ |
೨೦೦೨ | ಪರಿಸರ ರತ್ನ- ಕರ್ನಾಟಕ ಸರ್ಕಾರ |
೨೦೦೬ | ವಿದ್ಯಾಸಾಮ್ರಾಟ್- ಜೈನ್ ಕೌನ್ಸಿಲ್- ಕರ್ನಾಟಕ |
೨೦೦೭ | ಸೇವಾಸೂರ್ಯ-ನಿವಾರಣಾ ಸಂಸ್ಥೆ; ಬೆಂಗಳೂರು |
೨೦೦೭ | ಸನಾತನ ಧರ್ಮರತ್ನ- ಹಿಂದೂ ದೇವಾಲಯಗಳ ಮಹಾ ಒಕ್ಕೂಟ- ಉತ್ತರ ಅಮೇರಿಕಾ, ಯುರೋಪ್ |
೨೦೦೮ | ವೈದ್ಯಸೇವಾರತ್ನ- ಶ್ರೀ ಆದಿಚುಂಚನಗಿರಿ ಮಠ- ಬಾಲಗಂಗಾಧರ ನಗರ |
೨೦೦೮ ೨೦೧೦ | ಗೌರವ ಡಾಕ್ಟರೇಟ್-ಅಂತಾರಾಷ್ಟ್ರೀಯ ವೇದಿಕ್ ಹಿಂದೂ ವಿಸ್ವವಿದ್ಯಾಲಯ, ಅಮೇರಿಕಾ ಭಾರತ ಸರಕಾರದಿಂದ ಪದ್ಮಭೂಷಣ ಪ್ರಶಸ್ತಿ |
ಆದಿ ಚುಂಚನಗಿರಿಯ ಮಠದ ಅಧಿಪತಿಯಾಗಿ
ಸನ್. ೧೯೭೪ ರಲ್ಲಿ ಮಂಡ್ಯ ಜಿಲ್ಲೆಯ ನಾಗಮಂಗಲ ಗ್ರಾಮದ 'ಆದಿಚುಂಚನಗಿರಿಯ ವಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧಿಪತಿಗಳಾಗಿ ಪಟ್ಟಾಭಿಶಕ್ತರಾದ ಬಾಲಗಂಗಾಧರನಾಥ ಸ್ವಾಮಿಜಿಯವರು, ದೀನದಲಿತರ ಉದ್ಧಾರಕ್ಕಾಗಿ ಶಿಕ್ಷಣ ಒದಗಿಸಲೆಂದೇ ಶಿಕ್ಷಣ ಸಮೂಹವನ್ನೇ ನಿರ್ಮಿಸಿ ಒಂದು ಕ್ರಾಂತಿಯನ್ನು ಮಾಡಿದರು. 'ಅನ್ನದಾಸೋಹ', ಮತ್ತು 'ಅಕ್ಷರ ದಾಸೋಹ'ದ ಮೂಲಕ ಬಡ ಜನರ ಸೇವೆಯನ್ನು ಮಾಡಿದರು. 'ಹಸಿರು ಕ್ರಾಂತಿ ಹರಿಕಾ'ರರೆಂದು ಹೆಸರುಗಳಿಸಿದ ಶ್ರೀಗಳು ೫ ಕೋಟಿಗಿಡಗಳನ್ನು ನೆಟ್ಟು ಉಳಿದವರಿಗೆ ಮಾದರಿಯಾಗಿದ್ದಾರೆ.
ಮರಣ
ಸಿಂಗಪುರದಲ್ಲಿ ೯ ವರ್ಷಗಳ ಹಿಂದೆ 'ಮೌಂಟ್ ಎಲಿಜಬೆತ್ ಆಸ್ಪತ್ರೆ'ಯಲ್ಲಿ 'ಕಿಡ್ನಿ ಕಸಿ ಚಿಕಿತ್ಸೆಗೆ ಒಳಪಟ್ಟಿದ್ದ ಸ್ವಾಮೀಜಿಯವರು ಮುಂದೆ 'ಹೃದಯದ ಚಿಕಿತ್ಸೆ'ಗೂ ಒಳಪಟ್ಟಿದ್ದರು. 'ಮಧುಮೇಹ' ಅವರನ್ನು ಸತತವಾಗಿ ಕಾಡಿತ್ತು. ಎದೆನೋವಿನಿಂದ ಕೆಂಗೇರಿಯ ಬಳಿಯ ಬಿ.ಜಿ.ಎಸ್. ಗ್ಲೋಬಲ್ ಆಸ್ಪತ್ರೆಯಲ್ಲಿ ದಾಖಲಿಸಲ್ಪಟ್ಟಿದ್ದ ಸ್ವಾಮೀಜಿಯವರ ಆರೋಗ್ಯ , ಡಯಾಲಿಸಿಸ್ ಬಳಿಕವೂ ಸರಿಹೋಗದೆ, ೧೩ ನೆಯ ತಾರೀಖಿನ ಸಂಜೆ ೭ ಗಂಟೆಗೆ ತೀವ್ರ ಹೃದಯಾಘಾತದಿಂದ ಕೊನೆಯುಸಿರೆಳೆದರು. 'ನಾರಾಯಣ ಹೃದಯಾಲಯ', 'ಜಯದೇವ ಆಸ್ಪತ್ರೆ', 'ಜಿ.ಎಸ್.ಎಸ್. ಆಸ್ಪತ್ರೆ'ಯ ಹೃದಯ ತಜ್ಞರ ಚಿಕಿತ್ಸೆ ಕೆಲಸಕ್ಕೆ ಬರದೆ ಹೋಯಿ. ಶ್ರೀಗಳ ಪಾರ್ಥಿವ ಶರೀರವನ್ನು ಬೆಂಗಳೂರಿನ ಉಪನಗರವೊಂದಾದ ವಿಜಯನಗರದಲ್ಲಿರುವ ಮಠಕ್ಕೆ ಕೊಂಡೊಯ್ದು ಅಂತಿಮ ದರ್ಶನಕ್ಕೆ ಅನುವುಮಾಡಿಕೊಡಲಾಗಿದೆ. ಶ್ರೀಗಳ ಪಾರ್ಥಿವ ಶರೀರವನ್ನು ೧೫ ನೆಯ ತಾರೀಖಿನಂದು ಬೆಳಿಗ್ಯೆ ೯ ಗಂಟೆಗೆ ಅವರ ಹುಟ್ಟೂರಾದ ನಾಗಮಂಗಲಕ್ಕೆ ಮೆರವಣಿಗೆಯಲಿ ಕೊಂಡೊಯ್ದು ಭಕ್ತರ ದರ್ಶನಕ್ಕೆ ಇಟ್ಟು. ಅದೇದಿನದ ಸಂಜೆ ೪ ಗಂಟೆಯ ಸಮಯದಲ್ಲಿ ಮಠದ ಆವರಣದಲ್ಲಿ ಸಕಲ ಸರ್ಕಾರಿ ಮರ್ಯಾದೆಗಳೊಂದಿಗೆ ಅಂತ್ಯ ವಿಧಿಯನ್ನು ನೆರೆವೇರಿಸಲಾಯಿತು..