October 30, 2015

ಶ್ರೀ ಆದಿಚುಂಚನಗಿರಿ


ಆದಿಚುಂಚನಗಿರಿಯು ಒಂದು ಪುಣ್ಯಕ್ಷೇತ್ರವಾಗಿದ್ದು ಇದನ್ನು ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಎಂದೂ ಕರೆಯುತ್ತಾರೆ. ಇದು ಒಕ್ಕಲಿಗ ಸಮುದಾಯದ ಮಠವಾಗಿದ್ದು ಕರ್ನಾಟಕದ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನಲ್ಲಿದೆ. ಇದು ಬೆಂಗಳೂರಿನಿಂದ ೧೧೦ ಕಿಲೋಮೀಟರ್ ದೂರದಲ್ಲಿದೆ. ಬೆಂಗಳೂರಿನಿಂದ ಮಂಗಳೂರು ರಾ.ಹೆ.೪೭ ರಲ್ಲಿ ಸಾಗಿ ಬೆಳ್ಳೂರು ಕ್ರಾಸ್‍ಗೆ ತಲುಪಿದರೆ, ಅಲ್ಲಿಂದ ಸುಮಾರು ೦೮ ಕಿ.ಮೀ. ಅಂತರದಲ್ಲಿ ಆದಿಚುಂಚನಗಿರಿಯ ಬೆಟ್ಟ ಸಿಗುತ್ತದೆ. ಗಂಗಾಧರೇಶ್ವರನು ಇಲ್ಲಿಯ ಅಧಿದೇವತೆ. ಕಾಲಭೈರವೇಶ್ವರನು ಇಲ್ಲಿಯ ಕ್ಷೇತ್ರಪಾಲಕನು. ಮಠವು ಒಂದು ಬೆಟ್ಟದ ಮೇಲೆ ಇದ್ದು ಬೆಟ್ಟದ ಶಿಖರವನ್ನು ಆಕಾಶಭೈರವ ಎನ್ನುತ್ತಾರೆ. ಇಲ್ಲಿರುವ ಪವಿತ್ರ ಹೊಂಡವನ್ನು ಬಿಂದುಸರೋವರ ಎಂದು ಕರೆಯುತ್ತಾರೆ. ಈ ದೇವಸ್ಥಾನದಲ್ಲಿ ಕಾಲ ಭೈರವನ ವಾಹನವಾದ ಶ್ವಾನಗಳಿಗೆ ಪ್ರತಿದಿನ ಬೆಳಿಗ್ಗೆ ಮತ್ತು ರಾತ್ರಿ ಎರಡು ಬಾರಿ ಪೂಜೆ ಮಾಡಲಾಗುತ್ತದೆ. ಜಗದ್ಗುರುಗಳಾದ ಬಾಲಗಂಗಾಧರನಾಥ ಸ್ವಾಮೀಜಿಯವರು ಈಗ ಮಠದ ಮುಖ್ಯಸ್ಥರಾಗಿದ್ದಾರೆ. ಶಿಕ್ಷಣ ಮತ್ತು ಸಮಾಜ ಸೇವೆಗಾಗಿ ಅನೇಕ ಸಂಸ್ಥೆಗಳನ್ನು ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ನಡೆಸುತ್ತಿದೆ.