July 16, 2022

ಮಂಡ್ಯದ ಜೈಲು ಮತ್ತು ಒಂದು ವೃದ್ಧಾಶ್ರಮಕ್ಕೆ ಬೇಟಿ.

 ನಮ್ಮ ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥೆ ಕಾವ್ಯ ಮತ್ತು ಸಹಪ್ರಾಧ್ಯಾಪಕ ದೇವಾನಂದ್ ರವರ ನೇತೃತ್ವದಲ್ಲಿ ಮಂಡ್ಯದ ಜೈಲು ಮತ್ತು ಒಂದು ವೃದ್ಧಾಶ್ರಮಕ್ಕೆ ಬೇಟಿ ನೀಡಿ ಅಲ್ಲಿನ ಸಾಮಾಜಿಕ ಪರಿಸರ ಮತ್ತು ಆ ವ್ಯವಸ್ಥೆಗೆ ಅವರು ಬಂದ ಕಾರಣಗಳ ಬಗ್ಗೆ ಅಧ್ಯಯನ ನಡೆಸಿ ಕಾಲೇಜಿಗೆ ವರದಿ ಸಲ್ಲಿಸಿರುತ್ತಾರೆ.

July 13, 2022

ಮೈಸೂರು ವಿ.ವಿ. ಮಾಂಡವ್ಯ ವಲಯ ಅಂತರ ಕಾಲೇಜು ಪುರುಷರ ವಾಲಿಬಾಲ್ ಪಂದ್ಯಾವಳಿಯಲ್ಲಿ ನಮ್ಮ ಕಾಲೇಜು ಪ್ರಥಮ ಸ್ಥಾನ

 ಮೈಸೂರು ವಿ.ವಿ. ಮಾಂಡವ್ಯ ವಲಯ ಅಂತರ ಕಾಲೇಜು ಪುರುಷರ ವಾಲಿಬಾಲ್ ಪಂದ್ಯಾವಳಿಯಲ್ಲಿ ನಮ್ಮ ಕಾಲೇಜು ಪ್ರಥಮ ಸ್ಥಾನಕ್ಕೆ ಭಾಜನವಾಗಿದೆ. ಈ ಗೆಲುವಿನಿ೦ದಾಗಿ ಈ ತಂಡ ಅಂತರ ವಲಯ ಅಂತರ ಕಾಲೇಜು ಪಂದ್ಯಾವಳಿಗೆ ಅರ್ಹತೆ ಪಡೆದಿದೆ.ಈ ಸಂದಭದಲ್ಲಿ ವಿಜೇತರಿಗೆ ಮತ್ತು ದೈಹಿಕ ಶಿಕ್ಷಣ ನಿರ್ದೇಶಕರಿಗೆ ಕಾಲೇಜಿನ ಪರಾಗಿ ಧನ್ಯವಾದಗಳು.


July 11, 2022

11-07-2022 ರಂದು ವಿಶ್ವ ಜನಸಂಖ್ಯಾ ದಿನ ಆಚರಿಸಲಾಯಿತು.

 ವಿಶ್ವ ಜನಸಂಖ್ಯಾ ದಿನ. ಇದರ ಅಂಗವಾಗಿ ಸಾಂಸ್ಕೃತಿಕ ಸಮಿತಿ ಮತ್ತು ಅರ್ಥಶಾಸ್ತ್ರ ವಿಭಾಗದ ವತಿಯಿಂದ ಕಾಲೇಜಿನಲ್ಲಿ ಪ್ರಾರ್ಥನಾ ಸಭೆಯಲ್ಲಿ ಜನಸಂಖ್ಯೆ ಬೆಳವಣಿಗೆ ಮತ್ತು ಸಮಸ್ಯೆ ಬಗ್ಗೆ ಅರ್ಥಶಾಸ್ತ್ರ ಸಹಪ್ರಾಧ್ಯಾಪಕರಾದ ಮೋಹನ್ ಕುಮಾರ್ ನಾಯಕ್ ರವರು ಮಾತನಾಡಿದರು.


July 6, 2022

ದಿನಾಂಕ 06-07-2022 ರಂದು ಮೈಸೂರು ವಿಶ್ವವಿದ್ಯಾನಿಲಯ, ಮಾಂಡವ್ಯ ವಲಯದ ಅಂತರ ಕಾಲೇಜು ಮಹಿಳೆಯರ ಬಾಲ್ ಬ್ಯಾಡ್ಮಿಂಟನ್ ಸಾದನೆಗೈದ ವಿದ್ಯಾರ್ಥಿನಿಯರನ್ನು ಹಾಗೂ ಕಾಲೇಜಿನ ದೈಹಿಕ ನಿರ್ದೇಶಕರಾದ ಕೆ.ಬಿ. ಮಂಜುನಾಥರವರನ್ನು ಪ್ರಾಂಶುಪಾಲರು ಅಭಿನಂದಿಸಿದ್ದಾರೆ.ಪಂದ್ಯಾವಳಿ

 ದಿನಾಂಕ 06-07-2022 ರಂದು ಮೈಸೂರು ವಿಶ್ವವಿದ್ಯಾನಿಲಯ, ಮಾಂಡವ್ಯ ವಲಯದ ಅಂತರ ಕಾಲೇಜು ಮಹಿಳೆಯರ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿ ಮದ್ದೂರಿನ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜನಲ್ಲಿ ಆಯೋಜಿಸಲಾಗಿದ್ದು ನಾಗಮಂಗಲ ಪಟ್ಟಣದ ಶ್ರೀ ಆದಿ ಚುಂಚನಗಿರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಮಹಿಳೆಯರು ವಿನ್ನರ್ಸ (ಪ್ರಥಮ ಸ್ಥಾನ) ಆಗಿ ಮೈಸೂರು ವಿಶ್ವವಿದ್ಯಾನಿಲಯ ಮಹಿಳೆಯರ ಅಂತರ್ ವಲಯ ಬಾಲ್ ಬ್ಯಾಡ್ಮಿಂಟನ್ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಸಾದನೆಗೈದ ವಿದ್ಯಾರ್ಥಿನಿಯರನ್ನು ಹಾಗೂ ಕಾಲೇಜಿನ ದೈಹಿಕ ನಿರ್ದೇಶಕರಾದ ಕೆ.ಬಿ. ಮಂಜುನಾಥರವರನ್ನು ಪ್ರಾಂಶುಪಾಲರು ಅಭಿನಂದಿಸಿದ್ದಾರೆ.


June 21, 2022

ಅಂತರಾಷ್ಟ್ರೀಯ ಯೋಗ ದಿನಾಚರಣೆ

 

ನಾಗಮಂಗಲ. ಜೂ:- 21 ಶ್ರೀ ಆದಿಚುಂಚನಗಿರಿ ಕಲಾ ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಅಂತರ ರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. 

ಕಾಲೇಜಿನ ಪ್ರಾಂಶುಪಾಲ ಡಾ. ಬಿ. ಕೆ.ಲೋಕೇಶ್ ರವರು ಯೋಗ ದೀಪ ಹಚ್ಚುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. 
ಕಾಲೇಜಿನ ಎಲ್ಲಾ ಸಿಬ್ಬಂದಿಗಳು  ಶ್ವೇತ ಉಡುಪಿನಲ್ಲಿ ಹಾಜರಿದ್ದರು. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ  ಪ್ರೊ ಕೆ.ಬಿ. ಮುಂಜುನಾಥ್ ರವರ ನಿರ್ದೇಶನದಲ್ಲಿ, ಕಾಲೇಜಿನ ಸಹ ಗ್ರಂಥಪಾಲಕರಾದ ಯೋಗ ಪಟು ಎನ್. ಟಿ. ವಿಜಯ ಕುಮಾರ್ ರವರು ಯೋಗ ಮಾಡಿಸುವ ಮೂಲಕ ವಿದ್ಯಾರ್ಥಿಗಳು ಯೋಗ ಪ್ರದರ್ಶನ ಮಾಡಿದರು.
 ಯೋಗ ಪ್ರದರ್ಶನ ನಂತರ ಪ್ರಾಂಶುಪಾಲ ಡಾ. ಬಿ. ಕೆ. ಲೋಕೇಶ್ ರವರು ಪ್ರಾರ್ಥನಾ ಸಭೆಯಲ್ಲಿ ಯೋಗವನ್ನು ವಿಶ್ವಕ್ಕೆ ಪರಿಚಯಿಸುವ ಮೂಲಕ ಭಾರತ ವಿಶ್ವ ಗುರುವಾದುದು ಹೇಗೆ ಎ೦ದು ಪರಿಚಯಿಸಿದರು ಮತ್ತು ಪ್ರತಿವರ್ಷ ಜೂನ್ 21ನೇ ದಿನಾಂಕವೇ ಯಾಕೆ ಅಂ.ರಾ.ಯೋಗ ದಿನಾಚರಣೆ ಆಚರಿಸಲಾಗುತ್ತದೆ ಎ೦ದು ವಿವರಿಸಿದರು.

June 20, 2022

ಯೋಗ ರಥವನ್ನು ಸ್ವಾಗತಿಸಿ ಪ್ರೋತ್ಸಾಹಿಸಿ ಮೈಸೂರಿತ್ತ ಕಳುಹಿಸಿದ Rovers & Rangers ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗ.

 20-06-2022

ಇಂದು 2022ರ ಯೋಗ ರಥವನ್ನು ಸ್ವಾಗತಿಸಿ ಪ್ರೋತ್ಸಾಹಿಸಿ ಮೈಸೂರಿತ್ತ ಕಳುಹಿಸಿದ ನಮ್ಮ Rovers & Rangers ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗ.
June 17, 2022

special lecture program on "Computer Literacy

 Glimpses of special lecture program on "Computer Literacy", organised by Department of computer science in association with IQAC.

Sri. Chiranjeevi MR , resource person, enlighten our student's insight on the topic.June 15, 2022

ಮೈಸೂರಿನ ಸ್ವಾಮಿ ವಿವೇಕಾನಂದ ಕೇಂದ್ರ ನಡೆಸಿದ " ಏಕ ಭಾರತ ವಿಜಯೀ ಭಾರತ ' ಎಂಬ ಪರೀಕ್ಷೆಯಲ್ಲಿ ಪ್ರಥಮ ಬಿ.ಎ. ಸುಚಿತ್ರ ಎಂ.ಎಂ. ಎಂಬ ವಿದ್ಯಾಥಿ೯ನಿ ದ್ವಿತೀಯ ಬಹುಮಾನ ವಿತರಣೆ

 'ಸ್ವಾಮಿ ವಿವೇಕಾನಂದ ಕೇಂದ್ರ' ಮೈಸೂರು ಇಲ್ಲಿನ ಸಂಘಟಕರಾದ ಅರವಿಂದ ಪ್ರಸಾದ್ ರವರು ನಮ್ಮ ಕಾಲೇಜಿಗೆ ಬೇಟಿ ನೀಡಿ " ಏಕ ಭಾರತ ವಿಜಯೀ ಭಾರತ " ಎಂಬ ರಾಜ್ಯ ಮಟ್ಟದ ಪರೀಕೆಯಲ್ಲಿ ಉತ್ತೀರ್ಣರಾದವರಿಗೆ ಬಹುಮಾನ ಮತ್ತು ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು. ಮೈಸೂರಿನ ಸ್ವಾಮಿ ವಿವೇಕಾನಂದ ಕೇಂದ್ರ ನಡೆಸಿದ " ಏಕ ಭಾರತ ವಿಜಯೀ ಭಾರತ ' ಎಂಬ ಪರೀಕ್ಷೆಯಲ್ಲಿ ನಮ್ಮ ಕಾಲೇಜಿನ 84 ವಿದ್ಯಾರ್ಥಿಗಳು ಭಾಗವಯಿಸಿದ್ದರು. ಮೈಸೂರು ವಿಭಾಗದ 4 ಜಿಲ್ಲೆಗಳ ಕಾಲೇಜುಗಳ ವಿದ್ಯಾರ್ಥಿಗಳು ಬಾಗವಯಿಸಿದ್ಧ ಈ ಪರೀಕ್ಷೆಯಲ್ಲಿ ನನ್ನು ಕಾಲೇಜಿನ ಪ್ರಥಮ ಬಿ.ಎ. ಸುಚಿತ್ರ ಎಂ.ಎಂ. ಎಂಬ ವಿದ್ಯಾಥಿ೯ನಿ ದ್ವಿತೀಯ ಬಹುಮಾನ (3000 ರೂ ನಗದು) ಪಡೆದಿದ್ದಾರೆ.

ಶ್ರೀ ಅರವಿಂದ ಪ್ರಸಾದ್ ರವರು ಖುದ್ದಾಗಿ ಬಂದು ಬಹುಮಾನ ಮತ್ತು 84 ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸುವುದರ ಜೊತೆಗೆ ಸ್ವಾಮಿ ವಿವೇಕಾನಂದರ ಚಿಂತನೆ ಬಗ್ಗೆ ಸಂಕ್ಷಿಪ್ತ ವಿವರಣೆ ನೀಡಿದರು.

June 14, 2022

BSE-Capital Market Awareness Programme.(online)

 An Invester Education Programme (IEP) has been conducted in online mode, onbehalf of BSE-IPF at our college on "Capital Market Awareness;introduction to Mutual Fund & Financial planning" on 14th June 2022, for our M Com & B Com students.June 10, 2022

ದಿನಾಂಕ 10-06-2022 ರಂದು ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ಬಗ್ಗೆ ವಿಶೇಷ ಉಪನ್ಯಾಸ ಏರ್ಪಡಿಸಲಾಗಿತ್ತು.

 ದಿನಾಂಕ 10-06-2022 ರಂದು ನಮ್ಮ ಕಾಲೇಜಿನ IQAC ಮತ್ತು ಇತಿಹಾಸ ವಿಭಾಗದ ವತಿಯಿಂದ *ನಾಲ್ವಡಿ ಕೃಷ್ಣರಾಜ ಒಡೆಯರ್ ರವರ * ಮೇಲೆ ವಿಶೇಷ ಉಪನ್ಯಾಸ ಏರ್ಪಡಿಸಲಾಗಿತ್ತು.

ನಿವೃತ್ತ ಇತಿಹಾಸ ಸಹಾಯ ಪ್ರಾದ್ಯಾಪಕರಾದ ಪ್ರೊ ಬೈರೇಗೌಡರು ನಾಲ್ವಡಿ ಕೃಷ್ಣರಾಜ ಓಡೆಯರ ಜೀವನ ಮತ್ತು ಸಾದನೆ ಬಗ್ಗೆ ಮನಮೋಹಕವಾಗಿ ವಿವರಿಸಿದರು.
ಶ್ರೀಯುತ ಭೈರೇಗೌಡರು ವಿದ್ಯಾರ್ಥಿಗಳಿಗೆ ಧ್ಯಾನವನ್ನು ಬೋದಿಸುವುದರೊಂದಿಗೆ ವಿದ್ಯಾರ್ಥಿಗಳಿಗೆ ದ್ಯಾನ ಮಾಡಿಸಿ ತಮ್ಮ ಉಪನ್ಯಾಸ ಆರಂಭಿಸಿದರು.


June 6, 2022

ವಿಶ್ವ ಪರಿಸರ ದಿನಾಚರಣೆಯನ್ವಯ ಗಿಡ ನೆಡುವ ಕಾರ್ಯಕ್ರಮ.

 06-06-2022

NSS ವತಿಯಿಂದ ಕಾಲೇಜಿನಲ್ಲಿ ವಿಶ್ವ ಪರಿಸರ ದಿನಾಚರಣೆಯನ್ವಯ ಗಿಡ ನೆಡುವ ಕಾರ್ಯಕ್ರಮ ಮತ್ತು ಕಾಲೇಜಿನ ರಸ್ತೆಯ ಎರಡು ಭಾಗಗಳಲ್ಲಿ ಪಾರ್ಥೇನಿಯಂ ಮತ್ತಿತರ ಗಿಡಗಳನ್ನು ತೆಗೆದು ಸ್ವಚತಾ ಕಾರ್ಯಕ್ರಮ ಏರ್ಪಡಿಸಲಾಯಿತು. NSS ಅಧಿಕಾರಿಗಳಾದ ಮೋಹನ ಕುಮಾರ್ ನಾಯಕ್ ಮತ್ತು ಮೋಹನ್ ಕುಮಾರ್ ಆರ್. ರವರ ಸಂಘಟನೆಯಲ್ಲಿ ಕಾಲೇಜಿನ NSS ವಿದ್ಯಾರ್ಥಿಗಳು ಮತ್ತು ಎಲ್ಲಾ ಸಿಬ್ಬಂದಿ ಬಾಗಿಯಾಗಿದ್ದರು.